Monday, March 28, 2011

ಅನುಭವಗಳು ಬದಲಾದಾಗ!

ಯಾರ  ಜೀವನದಲ್ಲಿ  ಯಾವಾಗ  ಎನ್  ನಡೆಯುತ್ತೆ  ಹೇಗೆ  ನಡೆಯುತ್ತೆ   ಅಂತಾನೆ  ಗೋತ್ತಾಗೊದಿಲ್ಲ.  ಹೀಗೆ  ನಡೆಯುತ್ತೆ  ಅಂತ   ಊಹಿಸೊದಕ್ಕೂ  ಯಾರಿಂದ್ಲು  ಸಾಧ್ಯನೇ  ಇಲ್ಲ.  ಯಾವುದೇ  ಒಂದು  ಘಟನೆ  ನಡೆದಮೇಲೆನೆ   ಗೋತ್ತಾಗೊದು  ಹೀಗೆಲ್ಲ  ಆಗುತ್ತೆ  ಅಂತ.  ಹೀಗೆಲ್ಲ  ಆಗ್ಲುಬಹುದು  ಅಂತ  ನಮ್ಮ   ಕಲ್ಪನೆಗೂ   ಬಂದಿರಲ್ಲ.  ಬರೀ   ಕಲ್ಪನೆಯಲ್ಲೇ  ಬದುಕುವವರಿಗೂ  ಕೂಡ  ಗೊತ್ತಿರಲ್ಲ  ಬಿಡಿ  ಹೀಗೆಲ್ಲ  ಆಗಬಹುದಿತ್ತು  ಅಂತ.  ಘಟನೆಗಳು  ನಡೆದಮೇಲೆ  ಹೀಗೂ  ಸಹ  ಆಗಬಹುದು  ಅಂತ  ಅನಿಸುತ್ತೆ  ಅಷ್ಟೆ.  ಯಾಕೆ  ಈ  ಪೀಟಿಕೆ  ಅಂದ್ರೆ  ನನ್ನ  ಜೀವನದಲ್ಲಿ   ನಾನು  ಅಂದುಕೊಂಡಿದ್ದು  ಮಾತ್ರ  ನಡೆಯುತ್ತೆ  ಎಂದು  ತಿಳಿದಿದ್ದೆ  ಆದರೆ  ಈಗ  ಆಗುತ್ತಿರುವ  ಬದಲಾವಣೆಗಳನ್ನ  ನಾನ್ಯಾವತ್ತು  ಕಲ್ಪಿಸಿಕೊಂಡಿರಲಿಲ್ಲ.  ಈಗ  ಆಗುತ್ತಿರುವ  ಬದಲಾವಣೆಗಳನ್ನ  ನನ್ನ  ಅದೃಷ್ಟ ಅಂತ  ನಿರ್ಧರಿಸಲು  ಸಾಧ್ಯವಿಲ್ಲ  ನಾಳೆ  ಎನಾಗಬಹುದು  ಅಂತ  ಯಾರಿಗೆ  ಗೊತ್ತು  ಆದರೆ ಪಾಸಿಟಿವಾಗಿ ಇರಲಿ  ಅಂತ  ಗಣೇಶನಲ್ಲಿ   ಕೇಳ್ಕೊಬಹುದು  ಅಷ್ಟೆ.  ನಿಜ  ಹೆಳಬೇಕು  ಅಂದ್ರೆ   ನಾನು   ವಾಸ್ತವಕ್ಕಿಂತ  ಕನಸಿನ  ಲೋಖದಲ್ಲಿ  ಬದುಕ್ಕಿದ್ದೆ  ಹೇಚ್ಚು.  ಈ  ಕನಸಿನಲೋಖ  ಎಷ್ಟು  ಸುಂದರವೆಂದರೆ  ಅಲ್ಲಿ  ಎಲ್ಲವೂ  ಉಚಿತ.  ಅಲ್ಲಿನ  ಎಲ್ಲವು   ನಮಗೆ  ಪೂರಕವಾಗಿಯೇ ಇರುತ್ತವೆ.  ಈಗಲೂ  ಸಹ  ನನಗೆ  ಅನಿಸುತ್ತೆ   ನನ್ನ  ತಾತಾನಷ್ಟು  ನನ್ನ   ಪ್ರೀತಿಸುವವರು  ಯಾರು  ಸಿಕ್ಕಿಲ್ಲ,   ಸಿಕ್ಕೊದು  ಇಲ್ಲ  ಅನಿಸುತ್ತೆ.  ನನಗೆ  ೨೫  ವರ್ಷ  ಆಗಿದೆ.  ಈಷ್ಟು   ವರ್ಷದಲ್ಲಿ  ನನಗಾಗಿರುವ  ಅನುಭವ  ಯಾರೊಂದಿಗಾದ್ರು  ಹಂಚಿಕೊಂಡ್ರೆ  ನನ್ನನ್ನ  ಅಜ್ಜಿ  ಅಂತ  ಬೇಕಾದ್ರು   ತಿಳಿದುಕೊಳ್ಳುತ್ತಾರೆ.  ಈ  ಜೀವನ  ನನಗೆ   ತುಂಬಾ  ಹೇಳಿಕೊಟ್ಟಿದ್ದೆ,  ಅನುಭವಿನ್ನಾಗಿಸಿದೆ.  ಆದರೂ  ನಾನು  ಯಾವಗಲೂ   ಸಂತೋಷವಾಗಿರಬೇಕು  ಅಂದ್ರೆ   ಅದು  ಮಾತ್ರ   ನನ್ನಿಂದ   ಸಾಧ್ಯನೆ  ಇಲ್ಲ. 

ಜೀವ  ಇರುವ  ಯಾವುದೆ  ಮನುಷ್ಯನಿಗೆ  ಸುಖ, ದುಖಃಗಳೆರಡು  ಮಿಶ್ರಿತವಾಗಿರಲೇಬೇಕು  ಇಲ್ಲದಿದ್ದರೆ   ಜೀವನ  ನಿರಸವಾಗಿಬಿಡುತ್ತದೆ,  ಇದೆಲ್ಲ  ಹೇಳಲು  ಕೇಳಲು  ತುಂಬಾ  ಚೆನ್ನಾಗಿರುತ್ತೆ  ಜೀವನದಲ್ಲಿ  ಅಳವಡಿಸಿಕೊಳ್ಳಲು  ನನಗಂತೂ ಅಸಾಧ್ಯವಾದ  ಮಾತು.  ಇದನ್ನ   ಸಾಧ್ಯವಾಗಿಸಿಕೊಂಡವರು  ಮಾತ್ರ   ಸದಾ  ಸಂತೋಷವಾಗಿರುವರು.  ಯಾಕೆಂದರೆ  ಮಿಶ್ರಿತ  ಅಂದ್ರೆ  ಸುಖದುಖಃ,  ಆದರೆ  ಬರೀ  ದುಖಃ  ಹೆಚ್ಚಾದಾಗ  ಇದು  ಅಸಾಧ್ಯವಾಗುತ್ತೆ  ಅನಿಸುತ್ತೆ  ಇದು  ಸರಿನೋ  ತಪ್ಪೋ  ನನಗೆ  ಗೊತ್ತಿಲ್ಲ  ಇದು  ನನ್ನ  ಅನುಭವ. 

Monday, February 21, 2011

ದೇವರು?????

ದೇವರು, ಆ ಪದಕಿರುವ ಶಕ್ತಿ, ಉಚ್ಚರಿಸಿದಾಗ ಅಗುವ ಸಂಚಲನ, ಅವನ ಸ್ಮರಣೆಯಿಂದ ಸಿಗುವ ನೆಮ್ಮದಿ, ಇದು ಇನ್ನೆಲ್ಲಿಯು ಸಿಗಲು ಸಾಧ್ಯವೇ ಇಲ್ಲ ಇದು ನನ್ನ ಅನುಭವ.

ದೇವರಿಲ್ಲದಿದ್ದಿದ್ದರೆ? ಅಬ್ಬಾ! ಊಹಿಸಲಾಗದಂತ ಪ್ರಶ್ನೆ. ಅವನೇ ಇಲ್ಲದಿದ್ದಿದ್ದರೆ ಇಷ್ಟು ಸುಂದರ ಪ್ರಕೃತಿ ಎಲ್ಲಿರುತ್ತಿತ್ತು. ಅಯ್ಯೋ ನಾನು ನೀವುಗಳೆಲ್ಲಿರುತ್ತಿದ್ದೆವು ಇದರೆ ಬಗ್ಗೆ ಚರ್ಚಿಸಲು. ಅವನ ಸೃಷ್ಟಿಯಲ್ಲಿ ಎಲ್ಲವೂ ಅದ್ಬುತವೆ. ಆದರೆ ಈಗೀಗ ನನ್ನನ್ನ ಅತೀ ಹೆಚ್ಚು ಕಾಡುವ ಪ್ರಶ್ನೆ ಎಂದರೆ ದೇವರು ಎನ್ ಮಾಡ್ತಾ ಇದ್ದಾನೆ. ಒಮ್ಮೊಮ್ಮೆ ಅವನು ಇದ್ದನೋ ಇಲ್ಲವೋ ಎಂಬ ಪ್ರಶ್ನೆ ಕೂಡ ಬರತೊಡಗಿದೆ. ಅವನ್ನನ್ನ ಅತೀಯಾಗಿ ನಂಬುವ ನನಗೆ ಈ ಪರಿ ಪ್ರಶ್ನೆಗಳು ಉದ್ಬವಿಸಿದರೆ ನಾಸ್ತಿಕರಲ್ಲಿ ಇನ್ಯಾವ ಪರಿ ಪ್ರಶ್ನೆಗಳು ಮೂಡಬಹುದು. ದೇವರೆನಾದರೂ ಭೂಮಂಡಲವನ್ನು ಮರೆತು ಹಾಯಾಗಿರುವನೆ. ಇಲ್ಲ ಮನುಷ್ಯರನ್ನು ಸೃಷ್ಟಿಸಿ ತಪ್ಪುಮಾಡಿದೆನೆಂದು, ಅವರೆನಾದರೂ ಮಾಡಿಕೊಳ್ಳಲ್ಲಿ ಎಂದು ಸುಮ್ಮನಿರುವನೇ. ಅವನೇ ಸೃಷ್ಟಿಸಿದ ಮನುಷ್ಯರು ಅವನ ಹಿಡಿತದಲ್ಲಿಲ್ಲವೆಂದು ನೋಂದು ಸುಮ್ಮನಾಗಿರುವನೆ. ಹೀಗೆಲ್ಲ ಅವನಿಗೆ ಅನಿಸಿದ್ದರೆ ಅಯ್ಯೋ ಪಾಪ ಅವನು ಎಷ್ಟು ನೋಂದಿರುವನೋ. ದೇವರ ಬಗ್ಗೆ ಮರುಕ ಉಂಟಾಗುತ್ತಿದೆ. ಪ್ರಪಂಚದಲ್ಲಿ ಹೆಚ್ಚು ಕೆಟ್ಟವಿಷಯಗಳೇ ನಡೆಯಲು ಪ್ರತ್ಯಕ್ಷ್ಯವಾಗಿ ಪರೋಕ್ಷವಾಗಿ ಅವನೆ ಕಾರಣ. ಮನುಷ್ಯರಿಗೆ ಅತೀಯಾದ ಬುದ್ದಿ ಕೊಟ್ಟು ದೇವರನ್ನ ಈ ಹಾಳು ಮನುಷ್ಯರು ಕಡೆಗಣಿಸುವಂತಾಯಿತೆ?

ಅವನ ಸೃಷ್ಟಿ ಅದ್ಬುತವೆನಿಸುತ್ತಿತ್ತು. ಈಗ ಪ್ರಪಂಚ ಭಯಂಕರವಾಗಿ ಮಾರ್ಪಟ್ಟಿದ್ದೆ ಎಂದರೂ ತಪ್ಪಾಗಲಾರದೂ. ಅವನಿಗರಿವಿಲ್ಲದೆ ಒಂದು ಹುಲ್ಲುಕಡ್ಡಿಯು ಅಲುಗುವುದಿಲ್ಲವೆನ್ನುವರು ಆದರೆ ಈಗ ಪ್ರಪಂಚದಲ್ಲಿನ ಆಗುಹೊಗುಗಳನ್ನ ಕಂಡರೆ ಬರೀ ಪ್ರಶ್ನೆಗಳೇ ಮೂಡುತ್ತವೆ. ಈ ಪ್ರಶ್ನೆಗಳಿಗೆಲ್ಲ ದೇವರು ಹೇಗೆ ಉತ್ತರಿಸುವನೋ ನಾನರಿಯೆ. ನಿಮ್ಮಲೆನಾದರೂ ಉತ್ತರವಿದ್ದರೆ ದಯಮಾಡಿ ನನಗೂ ತಿಳಿಸಿ.

||ಓಂ ಗಂ ಗಣಪತ್ಯೆ ನಮಃ||

Monday, January 24, 2011

ನನ್ನ  ಪ್ರೀತಿಯ  ತಾತಾ.

ನಾನು  ತುಂಬಾ  ನತದೃಷ್ಟೆ  ಎಂದು  ತಿಳಿದಿದ್ದೆ.   ಅದಕ್ಕೆ   ಕಾರಣಗಳು  ಹಲವು,  ಅವುಗಳಲ್ಲಿ  ಮೊದಲನೆಯವರು  ನನ್ನ  ತಂದೆ,  ಅವರಿಗೆ  ನಾನಿಷ್ಟವಿರಲ್ಲಿಲ್ಲ  ಎನ್ನುವುದಕ್ಕಿಂತ   ಅವರಿಗೆ  ನನ್ನ  ತಂಗಿ  ಎಂದರೆ  ಪ್ರಾಣ  ಎಂದು  ತಿಳಿಸಲು  ಇಷ್ಟಪಡುತ್ತೇನೆ  ಹಾಗೂ  ಅವರ  ಬಗ್ಗೆ  ಹೆಚ್ಚು  ಹೇಳಲು  ಇಷ್ಟಪಡುವುದಿಲ್ಲ  ಯಾಕೆಂದರೆ  ಅವರೀಗ  ನಮ್ಮೊಂದಿಗಿಲ್ಲ.  ಅವರು  ನಮ್ಮನ್ನಗಲಿ  ಹಲವು  ವರ್ಷಗಳೇ  ಕಳೆದಿವೆ.  ನನಗೂ  ಸಹ  ನನ್ನ  ತಂಗಿ  ಎಂದರೆ  ಪ್ರಾಣ  ಅವಳಿಗೂ  ನಾನೆಂದರೆ   ತುಂಬಾ  ಪ್ರೀತಿ.  ಎರಡನೆ  ಕಾರಣ  ನನ್ನಮ್ಮ  ಅವಳನ್ನು   ನಾನು ದೂಷಿಸಲು  ಇಷ್ಟಪಡುವುದಿಲ್ಲ   ಯಾಕೆಂದರೆ  ಅವಳ  ಪರಿಸರ  ಹಾಗೂ  ಪರಿಸ್ಥಿತಿ  ಅವಳು  ನನ್ನನ್ನು   ಕಡೆಗಣಿಸುವಂತೆ  ಮಾಡಿದೆ.  ಅವಳು  ನನ್ನನ್ನು   ಕಡೆಗಣಿಸುವಳೆಂದು   ನಾನು   ಎಂದಿಗೂ   ಅವಳನ್ನ   ದ್ವೇಶಿಸಿಲ್ಲ  ಮುಂದೆಯೂ  ಸಹ  ದ್ವೇಶಿಸುವುದಿಲ್ಲ.  ಮೂರನೆಯವರು ಸಂಭಂದಿಗಳು  ಅವರಿಗೆ  ಅವರವರದೆ  ತೊಂದರೆಗಳು  ಹೆಚ್ಚು  ಆದ್ದರಿಂದ  ಅವರನ್ನು  ಸಹ  ನಾನು  ದೂಷಿಸುವುದಿಲ್ಲ.   ಇನ್ನೂ  ನಾಲ್ಕನೆಯವರು  ಸ್ನೇಹಿತರು,  ಅವರಲ್ಲಿ  ಹೆಚ್ಚಿನವರು  ಸಹಾಯ ಪಡೆದು  ನಂತರ  ನನ್ನನ್ನ  ದೂಷಿಸಿದ್ದಾರೆ.   ಇಲ್ಲಿ  ಯಾರನ್ನು  ನಾನು  ದೂಷಿಸಲು  ಇಷ್ಟಪಡುವುದಿಲ್ಲ.  ಅವರವರ ಪ್ರೀತಿ  ಅವರವರ  ಇಷ್ಟ.  ಆದರೆ   ಇವರೆಲ್ಲರ  ಪ್ರೀತಿಯನ್ನು   ಒಬ್ಬರಿಂದ  ಪಡೆಯಲು  ಸಾಧ್ಯವೆಂದು  ನಾನು  ಎಂದು  ಕನಸ್ಸಿನಲ್ಲಿಯೂ ತಿಳಿದಿರಲಿಲ್ಲ.  ಆ  ಪ್ರೀತಿಯೇ  ನನ್ನ  ತಾತಾ.  ಅವರು  ನನ್ನ  ಸಂಭಂದಿಯಲ್ಲ,  ಅದರೂ  ನನ್ನನ್ನು  ಅತೀ  ಹೆಚ್ಚು   ಪ್ರೀತಿಸುವ  ನನ್ನ  ಪ್ರೀತಿಯ  ತಾತಾ.  ನನಗೆ  ತುಂಬಾ  ಪ್ರೀಯವಾದ   ಎರಡು  ಪದಗಳಿವೆ  ಅವು  ಗಣೇಶ ಹಾಗೂ  ನನ್ನ  ತಾತಾ.     ಅವರಿಗೆ  ನಾನೆನು  ಅಲ್ಲದಿದ್ದರು  ಅವರು  ನನ್ನನ್ನು  ನೋಡಿಕೊಳ್ಳುವ  ಪರಿ  ನನ್ನ  ಬಗ್ಗೆ  ಅವರಿಗಿರುವ  ಕಾಳಜಿ  ಇವೆಲ್ಲವೂ  ನನ್ನನ್ನು  ಅದೃಷ್ಟವಂತೆಯನ್ನಾಗಿಸಿದೆ.  ಅವರು  ನನಗೆ  ಇಷ್ಟವಿಲ್ಲದೆ  ದೊರೆತ  ಅದೃಷ್ಟ. ಈ  ವಿಷಯಕ್ಕೆ  ನಾನು  ನನ್ನ  ಗಣೇಶನಿಗೆ  ಕೃತಘ್ನಳು.  ಅವರು  ನನ್ನ  ಬಗ್ಗೆ   ಕಾಳಜಿವಹಿಸಲು  ಕಾರಣ  ಅವರ  ಮಗಳು.  ಅವರ  ಮಗಳಿಗೆ  ನಾನು  ಚಿರರುಣಿ.  ಅವರೀಗ  ಈ  ಭೂಮಿಯಮೇಲೆ  ಇಲ್ಲ  ಅವರ  ದುರದೃಷ್ಟವೇ  ನನ್ನ  ಅದೃಷ್ಟವಾಗಿದೆ  ಎಂದರೆ  ತಪ್ಪಾಗಲಾರದು.   ಅವರು  ವಿಧಿವಶರಾದ  ಮೇಲೆ  ನಾನು  ನನ್ನ  ತಾತಾನ  ಪ್ರೀತಿಯ  ಮಗಳು  ಹಾಗೂ  ಮೊಮ್ಮಗಳೂ  ಅಗಿರುವೆ.  ನನ್ನ   ತಾತಾ  ಎಷ್ಟು  ನನ್ನ  ಬಗ್ಗೆ   ಕಾಳಜಿವಹಿಸುವವರೆಂದರೆ  ನನ್ನಲ್ಲಿನ್ನ  ಒಂದು ಕೆಟ್ಟಗುಣಗಳನ್ನೂ  ಅವರು  ಸಹಿಸುವುದಿಲ್ಲ.   ನಾನು  ಯಾವುದೆ  ಕೆಲಸವನ್ನು  ಅವರಿಗೆ  ತಿಳಿಸದೆ  ಮಾಡುವುದಿಲ್ಲ.  ಅವರು  ನನ್ನ  ಮಾರ್ಗದರ್ಶಿಗಳು,  ಹಿತೈಷಿಗಳು,  ಗುರುಗಳು  ಹಾಗೂ  ನನ್ನ  ಆತ್ಮಿಯ  ಗೆಳೆಯ,  ನನ್ನ  ಪ್ರೀತಿಯ  ಅಮ್ಮ   ಅಪ್ಪ   ಎಲ್ಲವೂ  ಅವರೇ.   ಅವರು  ನನ್ನನ್ನು  ಹೆಚ್ಚು  ಬೈದಿದ್ದಾರೆ,   ಆದರೆ   ಅವೆಲ್ಲವು  ನನಗೆ  ಪ್ರೀತಿಯಿಂದ  ಕಂಡಿವೆ.  ಯಾಕೆಂದರೆ  ಬೈದನಂತರ  ಅವರು  ನನ್ನನ್ನು  ಸಂತೈಯಿಸುತ್ತಾರೆ.  ಇದನ್ನು  ಬೇರಾರು  ನನಗೆ  ಮಾಡಿಲ್ಲ.  ಒಟ್ಟಿನಲ್ಲಿ  ನನ್ನ  ತಾತಾ  ನನ್ನ   ಅದೃಷ್ಟ.  

ಇದನ್ನು   ಓದಿ  ಇವಳೆನು  ತನ್ನ   ತಂದೆ  ತಾಯಿಯ  ಬಗ್ಗೆ  ಹೀಗೆ  ಬರೆದ್ದಿದ್ದಾಳೆಂದು  ಕೊಂಡರೆ  ಕ್ಷಮಿಸಿ.  ನೋಡುವವರ  ಕಣ್ಣಿಗೆ   ನೋವು  ಕಾಣಿಸುವುದಿಲ್ಲ.  ನೋಂದವರಿಗೆ  ಮಾತ್ರ  ನೋವು  ತಿಳಿಯುವುದು.