Monday, January 24, 2011

ನನ್ನ  ಪ್ರೀತಿಯ  ತಾತಾ.

ನಾನು  ತುಂಬಾ  ನತದೃಷ್ಟೆ  ಎಂದು  ತಿಳಿದಿದ್ದೆ.   ಅದಕ್ಕೆ   ಕಾರಣಗಳು  ಹಲವು,  ಅವುಗಳಲ್ಲಿ  ಮೊದಲನೆಯವರು  ನನ್ನ  ತಂದೆ,  ಅವರಿಗೆ  ನಾನಿಷ್ಟವಿರಲ್ಲಿಲ್ಲ  ಎನ್ನುವುದಕ್ಕಿಂತ   ಅವರಿಗೆ  ನನ್ನ  ತಂಗಿ  ಎಂದರೆ  ಪ್ರಾಣ  ಎಂದು  ತಿಳಿಸಲು  ಇಷ್ಟಪಡುತ್ತೇನೆ  ಹಾಗೂ  ಅವರ  ಬಗ್ಗೆ  ಹೆಚ್ಚು  ಹೇಳಲು  ಇಷ್ಟಪಡುವುದಿಲ್ಲ  ಯಾಕೆಂದರೆ  ಅವರೀಗ  ನಮ್ಮೊಂದಿಗಿಲ್ಲ.  ಅವರು  ನಮ್ಮನ್ನಗಲಿ  ಹಲವು  ವರ್ಷಗಳೇ  ಕಳೆದಿವೆ.  ನನಗೂ  ಸಹ  ನನ್ನ  ತಂಗಿ  ಎಂದರೆ  ಪ್ರಾಣ  ಅವಳಿಗೂ  ನಾನೆಂದರೆ   ತುಂಬಾ  ಪ್ರೀತಿ.  ಎರಡನೆ  ಕಾರಣ  ನನ್ನಮ್ಮ  ಅವಳನ್ನು   ನಾನು ದೂಷಿಸಲು  ಇಷ್ಟಪಡುವುದಿಲ್ಲ   ಯಾಕೆಂದರೆ  ಅವಳ  ಪರಿಸರ  ಹಾಗೂ  ಪರಿಸ್ಥಿತಿ  ಅವಳು  ನನ್ನನ್ನು   ಕಡೆಗಣಿಸುವಂತೆ  ಮಾಡಿದೆ.  ಅವಳು  ನನ್ನನ್ನು   ಕಡೆಗಣಿಸುವಳೆಂದು   ನಾನು   ಎಂದಿಗೂ   ಅವಳನ್ನ   ದ್ವೇಶಿಸಿಲ್ಲ  ಮುಂದೆಯೂ  ಸಹ  ದ್ವೇಶಿಸುವುದಿಲ್ಲ.  ಮೂರನೆಯವರು ಸಂಭಂದಿಗಳು  ಅವರಿಗೆ  ಅವರವರದೆ  ತೊಂದರೆಗಳು  ಹೆಚ್ಚು  ಆದ್ದರಿಂದ  ಅವರನ್ನು  ಸಹ  ನಾನು  ದೂಷಿಸುವುದಿಲ್ಲ.   ಇನ್ನೂ  ನಾಲ್ಕನೆಯವರು  ಸ್ನೇಹಿತರು,  ಅವರಲ್ಲಿ  ಹೆಚ್ಚಿನವರು  ಸಹಾಯ ಪಡೆದು  ನಂತರ  ನನ್ನನ್ನ  ದೂಷಿಸಿದ್ದಾರೆ.   ಇಲ್ಲಿ  ಯಾರನ್ನು  ನಾನು  ದೂಷಿಸಲು  ಇಷ್ಟಪಡುವುದಿಲ್ಲ.  ಅವರವರ ಪ್ರೀತಿ  ಅವರವರ  ಇಷ್ಟ.  ಆದರೆ   ಇವರೆಲ್ಲರ  ಪ್ರೀತಿಯನ್ನು   ಒಬ್ಬರಿಂದ  ಪಡೆಯಲು  ಸಾಧ್ಯವೆಂದು  ನಾನು  ಎಂದು  ಕನಸ್ಸಿನಲ್ಲಿಯೂ ತಿಳಿದಿರಲಿಲ್ಲ.  ಆ  ಪ್ರೀತಿಯೇ  ನನ್ನ  ತಾತಾ.  ಅವರು  ನನ್ನ  ಸಂಭಂದಿಯಲ್ಲ,  ಅದರೂ  ನನ್ನನ್ನು  ಅತೀ  ಹೆಚ್ಚು   ಪ್ರೀತಿಸುವ  ನನ್ನ  ಪ್ರೀತಿಯ  ತಾತಾ.  ನನಗೆ  ತುಂಬಾ  ಪ್ರೀಯವಾದ   ಎರಡು  ಪದಗಳಿವೆ  ಅವು  ಗಣೇಶ ಹಾಗೂ  ನನ್ನ  ತಾತಾ.     ಅವರಿಗೆ  ನಾನೆನು  ಅಲ್ಲದಿದ್ದರು  ಅವರು  ನನ್ನನ್ನು  ನೋಡಿಕೊಳ್ಳುವ  ಪರಿ  ನನ್ನ  ಬಗ್ಗೆ  ಅವರಿಗಿರುವ  ಕಾಳಜಿ  ಇವೆಲ್ಲವೂ  ನನ್ನನ್ನು  ಅದೃಷ್ಟವಂತೆಯನ್ನಾಗಿಸಿದೆ.  ಅವರು  ನನಗೆ  ಇಷ್ಟವಿಲ್ಲದೆ  ದೊರೆತ  ಅದೃಷ್ಟ. ಈ  ವಿಷಯಕ್ಕೆ  ನಾನು  ನನ್ನ  ಗಣೇಶನಿಗೆ  ಕೃತಘ್ನಳು.  ಅವರು  ನನ್ನ  ಬಗ್ಗೆ   ಕಾಳಜಿವಹಿಸಲು  ಕಾರಣ  ಅವರ  ಮಗಳು.  ಅವರ  ಮಗಳಿಗೆ  ನಾನು  ಚಿರರುಣಿ.  ಅವರೀಗ  ಈ  ಭೂಮಿಯಮೇಲೆ  ಇಲ್ಲ  ಅವರ  ದುರದೃಷ್ಟವೇ  ನನ್ನ  ಅದೃಷ್ಟವಾಗಿದೆ  ಎಂದರೆ  ತಪ್ಪಾಗಲಾರದು.   ಅವರು  ವಿಧಿವಶರಾದ  ಮೇಲೆ  ನಾನು  ನನ್ನ  ತಾತಾನ  ಪ್ರೀತಿಯ  ಮಗಳು  ಹಾಗೂ  ಮೊಮ್ಮಗಳೂ  ಅಗಿರುವೆ.  ನನ್ನ   ತಾತಾ  ಎಷ್ಟು  ನನ್ನ  ಬಗ್ಗೆ   ಕಾಳಜಿವಹಿಸುವವರೆಂದರೆ  ನನ್ನಲ್ಲಿನ್ನ  ಒಂದು ಕೆಟ್ಟಗುಣಗಳನ್ನೂ  ಅವರು  ಸಹಿಸುವುದಿಲ್ಲ.   ನಾನು  ಯಾವುದೆ  ಕೆಲಸವನ್ನು  ಅವರಿಗೆ  ತಿಳಿಸದೆ  ಮಾಡುವುದಿಲ್ಲ.  ಅವರು  ನನ್ನ  ಮಾರ್ಗದರ್ಶಿಗಳು,  ಹಿತೈಷಿಗಳು,  ಗುರುಗಳು  ಹಾಗೂ  ನನ್ನ  ಆತ್ಮಿಯ  ಗೆಳೆಯ,  ನನ್ನ  ಪ್ರೀತಿಯ  ಅಮ್ಮ   ಅಪ್ಪ   ಎಲ್ಲವೂ  ಅವರೇ.   ಅವರು  ನನ್ನನ್ನು  ಹೆಚ್ಚು  ಬೈದಿದ್ದಾರೆ,   ಆದರೆ   ಅವೆಲ್ಲವು  ನನಗೆ  ಪ್ರೀತಿಯಿಂದ  ಕಂಡಿವೆ.  ಯಾಕೆಂದರೆ  ಬೈದನಂತರ  ಅವರು  ನನ್ನನ್ನು  ಸಂತೈಯಿಸುತ್ತಾರೆ.  ಇದನ್ನು  ಬೇರಾರು  ನನಗೆ  ಮಾಡಿಲ್ಲ.  ಒಟ್ಟಿನಲ್ಲಿ  ನನ್ನ  ತಾತಾ  ನನ್ನ   ಅದೃಷ್ಟ.  

ಇದನ್ನು   ಓದಿ  ಇವಳೆನು  ತನ್ನ   ತಂದೆ  ತಾಯಿಯ  ಬಗ್ಗೆ  ಹೀಗೆ  ಬರೆದ್ದಿದ್ದಾಳೆಂದು  ಕೊಂಡರೆ  ಕ್ಷಮಿಸಿ.  ನೋಡುವವರ  ಕಣ್ಣಿಗೆ   ನೋವು  ಕಾಣಿಸುವುದಿಲ್ಲ.  ನೋಂದವರಿಗೆ  ಮಾತ್ರ  ನೋವು  ತಿಳಿಯುವುದು.