Monday, February 21, 2011

ದೇವರು?????

ದೇವರು, ಆ ಪದಕಿರುವ ಶಕ್ತಿ, ಉಚ್ಚರಿಸಿದಾಗ ಅಗುವ ಸಂಚಲನ, ಅವನ ಸ್ಮರಣೆಯಿಂದ ಸಿಗುವ ನೆಮ್ಮದಿ, ಇದು ಇನ್ನೆಲ್ಲಿಯು ಸಿಗಲು ಸಾಧ್ಯವೇ ಇಲ್ಲ ಇದು ನನ್ನ ಅನುಭವ.

ದೇವರಿಲ್ಲದಿದ್ದಿದ್ದರೆ? ಅಬ್ಬಾ! ಊಹಿಸಲಾಗದಂತ ಪ್ರಶ್ನೆ. ಅವನೇ ಇಲ್ಲದಿದ್ದಿದ್ದರೆ ಇಷ್ಟು ಸುಂದರ ಪ್ರಕೃತಿ ಎಲ್ಲಿರುತ್ತಿತ್ತು. ಅಯ್ಯೋ ನಾನು ನೀವುಗಳೆಲ್ಲಿರುತ್ತಿದ್ದೆವು ಇದರೆ ಬಗ್ಗೆ ಚರ್ಚಿಸಲು. ಅವನ ಸೃಷ್ಟಿಯಲ್ಲಿ ಎಲ್ಲವೂ ಅದ್ಬುತವೆ. ಆದರೆ ಈಗೀಗ ನನ್ನನ್ನ ಅತೀ ಹೆಚ್ಚು ಕಾಡುವ ಪ್ರಶ್ನೆ ಎಂದರೆ ದೇವರು ಎನ್ ಮಾಡ್ತಾ ಇದ್ದಾನೆ. ಒಮ್ಮೊಮ್ಮೆ ಅವನು ಇದ್ದನೋ ಇಲ್ಲವೋ ಎಂಬ ಪ್ರಶ್ನೆ ಕೂಡ ಬರತೊಡಗಿದೆ. ಅವನ್ನನ್ನ ಅತೀಯಾಗಿ ನಂಬುವ ನನಗೆ ಈ ಪರಿ ಪ್ರಶ್ನೆಗಳು ಉದ್ಬವಿಸಿದರೆ ನಾಸ್ತಿಕರಲ್ಲಿ ಇನ್ಯಾವ ಪರಿ ಪ್ರಶ್ನೆಗಳು ಮೂಡಬಹುದು. ದೇವರೆನಾದರೂ ಭೂಮಂಡಲವನ್ನು ಮರೆತು ಹಾಯಾಗಿರುವನೆ. ಇಲ್ಲ ಮನುಷ್ಯರನ್ನು ಸೃಷ್ಟಿಸಿ ತಪ್ಪುಮಾಡಿದೆನೆಂದು, ಅವರೆನಾದರೂ ಮಾಡಿಕೊಳ್ಳಲ್ಲಿ ಎಂದು ಸುಮ್ಮನಿರುವನೇ. ಅವನೇ ಸೃಷ್ಟಿಸಿದ ಮನುಷ್ಯರು ಅವನ ಹಿಡಿತದಲ್ಲಿಲ್ಲವೆಂದು ನೋಂದು ಸುಮ್ಮನಾಗಿರುವನೆ. ಹೀಗೆಲ್ಲ ಅವನಿಗೆ ಅನಿಸಿದ್ದರೆ ಅಯ್ಯೋ ಪಾಪ ಅವನು ಎಷ್ಟು ನೋಂದಿರುವನೋ. ದೇವರ ಬಗ್ಗೆ ಮರುಕ ಉಂಟಾಗುತ್ತಿದೆ. ಪ್ರಪಂಚದಲ್ಲಿ ಹೆಚ್ಚು ಕೆಟ್ಟವಿಷಯಗಳೇ ನಡೆಯಲು ಪ್ರತ್ಯಕ್ಷ್ಯವಾಗಿ ಪರೋಕ್ಷವಾಗಿ ಅವನೆ ಕಾರಣ. ಮನುಷ್ಯರಿಗೆ ಅತೀಯಾದ ಬುದ್ದಿ ಕೊಟ್ಟು ದೇವರನ್ನ ಈ ಹಾಳು ಮನುಷ್ಯರು ಕಡೆಗಣಿಸುವಂತಾಯಿತೆ?

ಅವನ ಸೃಷ್ಟಿ ಅದ್ಬುತವೆನಿಸುತ್ತಿತ್ತು. ಈಗ ಪ್ರಪಂಚ ಭಯಂಕರವಾಗಿ ಮಾರ್ಪಟ್ಟಿದ್ದೆ ಎಂದರೂ ತಪ್ಪಾಗಲಾರದೂ. ಅವನಿಗರಿವಿಲ್ಲದೆ ಒಂದು ಹುಲ್ಲುಕಡ್ಡಿಯು ಅಲುಗುವುದಿಲ್ಲವೆನ್ನುವರು ಆದರೆ ಈಗ ಪ್ರಪಂಚದಲ್ಲಿನ ಆಗುಹೊಗುಗಳನ್ನ ಕಂಡರೆ ಬರೀ ಪ್ರಶ್ನೆಗಳೇ ಮೂಡುತ್ತವೆ. ಈ ಪ್ರಶ್ನೆಗಳಿಗೆಲ್ಲ ದೇವರು ಹೇಗೆ ಉತ್ತರಿಸುವನೋ ನಾನರಿಯೆ. ನಿಮ್ಮಲೆನಾದರೂ ಉತ್ತರವಿದ್ದರೆ ದಯಮಾಡಿ ನನಗೂ ತಿಳಿಸಿ.

||ಓಂ ಗಂ ಗಣಪತ್ಯೆ ನಮಃ||