Monday, January 9, 2012


ಮರೆಯಾಗಿ  ನೋವಾಗಿ  ಉಳಿದದ್ದು


ಯಾವುದೇ   ಒಂದು   ಚಿಕ್ಕ   ವಸ್ತುವನ್ನ   ಕಳೆದುಕೊಂಡರೆ  ಅದನ್ನ  ಹುಡುಕಿ  ನಾವು  ಪರಿತಪಿಸುವ  ಪರಿ  ಹೇಗಿರುತ್ತದೆ?  ನಾವು  ಮತ್ತೆ  ಖರೀದಿಸಬಹುದಾದ  ವಸ್ತುವಿನ  ಮೇಲೆಯೇ  ನಮಗೆ  ಎಷ್ಟು   ವ್ಯಾಮೋಹ.  ಹಾಗಿರುವಾಗ   ನಮ್ಮಿಂದ  ಈ  ಭೂಮಿಯನ್ನ  ನೋಡಬೇಕಾದ  ಒಂದು  ಜೀವ  ಇಲ್ಲವಾದಾಗಿನ  ನೋವು  ಹೇಳತಿರದು.  ಆಗ  ದೇಹಕ್ಕಾಗುವ  ನೋವು  ಎನು  ಇಲ್ಲ.  ದೇಹದ  ನೋವು  ಮಾಗಿ  ಎಷ್ಟು  ಸಮಯವಾದರು.  ಮನಸ್ಸಿನಲ್ಲಾದ  ಗಾಯ  ಮಾಸುವುದೇ  ಇಲ್ಲ.  ಆ  ವಿಷಯಕ್ಕೆ  ಸಂಬಂಧಪಟ್ಟ  ಯಾವುದೇ  ವಸ್ತು,  ವಿಷಯ  ನೋಡಿದಾಗಲೆಲ್ಲ   ಮನಸ್ಸಿಗಾಗುವ  ನೋವು  ಯಾರಿಗೂಬೇಡ.  ಎಲ್ಲೊ  ಮನಸ್ಸಿನ  ಮೂಲೆಯಲ್ಲಿ  ಪಾಪ  ಪ್ರಙ್ನೆ.  ನನ್ನಿಂದಲೆ  ಹೀಗಾಯಿತೆನೊ  ಎಂಬ   ವೇದನೆ.  ಬದುಕೇ   ಸಾಕೆನ್ನಿಸುವಷ್ಟು   ಬೇಜಾರು. 


ಇಷ್ಟಕ್ಕು  ನಾ  ಮಾಡಿದ  ತಪ್ಪಾದರೂ  ಎನು  ಎಂಬ  ಪ್ರಶ್ನೆಗೆ   ನನಗೆ   ಇನ್ನು   ಉತ್ತರ   ದೊರೆತಿಲ್ಲ.  ನನ್ನ  ತಪ್ಪೆನಿಲ್ಲವೆಂದರೂ  ಕಳೆದುಕೊಂಡವಳು  ಮಾತ್ರ  ನಾನೇ.   ಇದರ   ನೋವು  ಮಾತ್ರ  ನಾನು  ಬದುಕಿರುವವರೆಗೂ  ಇರುತ್ತದೆ.  ಈ  ಪ್ರಶ್ನೆಗಳು  ನನ್ನಲ್ಲಿ  ಮುಡಿ  ಬದುಕು  ಮರುಭೂಮಿಯಂತಾಗಿದೆ.  ನೋವಿಗೆ  ಕೊನೆಇಲ್ಲದಂತಾಗಿದೆ  ಜೀವನದಲ್ಲಿ.  ಇದಕ್ಕೆಲ್ಲ  ಪರಿಹಾರವೇ  ಇಲ್ಲವೇ!  


ಜೀವನ  ಎಲ್ಲರಿಗೂ  ಒಂದೇ  ತರಹ  ಇರುವುದಿಲ್ಲ.  ನೋವು  ಮಾತ್ರ  ಎಲ್ಲರಿಗೂ  ಒಂದೇ.  ನಾನ್ಯಾಕೆ  ಹೀಗಿದ್ದೀನಿ   ಅನ್ನೋ  ಪ್ರಶ್ನೆಗೆ  ಎಷ್ಟೋ  ವರ್ಷದಿಂದ  ಉತ್ತರ  ಹುಡುಕಿ  ಸೋತಿದ್ದೇನೆ. ಸದಾ  ಸಂತೋಷವಾಗಿರಲು  ನನ್ನಿಂದ  ಯಾಕೊ  ಸಾಧ್ಯಾವಾಗುತ್ತಿಲ್ಲ.  ಎನಾದರೂ  ಸಂತೋಷಕ್ಕೂ  ನನಗೂ  ಆಗಿಬರುವುದಿಲ್ಲ?  ಅಂತ  ಅನುಮಾನ  ಬೇರೆ  ಹುಟ್ಟಿಕೊಂಡಿದೆ.  ನನಗೂ  ನೋವಿಗೂ  ಎಲ್ಲಿಲ್ಲದ  ಅವಿನಾಭಾವ  ಸಂಬಂಧ.  ನನ್ನನ್ನ  ನೋವು  ಹುಡುಕಿಕೊಂಡು  ಬರಲ್ಲ  ನಾನೇ  ಯಾವಾಗ್ಲೂ  ಅದನ್ನ  ಹುಡುಕಿ  ಅನುಭವಿಸುತ್ತೇನೆ  ಅಂತ  ಅನಿಸುತ್ತೆ.  ಇದಕ್ಕೆಲ್ಲ  ಯಾರಲ್ಲಿ  ಉತ್ತವಿದೆಯೋ  ಗೊತ್ತಿಲ್ಲ.