Monday, November 29, 2010

ಹಿಗೊಂದು  ಸಂಭಂದ

ಇವಳನ್ನ  ಮುಗ್ದೆ  ಎನ್ನಬೇಕೋ?  ಮೂರ್ಖೆ  ಎನ್ನಬೇಕೋ?  ನಿವೇ  ನಿರ್ಧರಿಸಿ.

ಅವಳಿಗೆ  ಅವನೆಂದರೆ ಅಪಾರ  ನಂಬಿಕೆ, ಪ್ರೀತಿ,  ವಾತ್ಸಲ್ಯ,  ಅಕ್ಕರೆ  ಹಾಗೂ  ಭಕ್ತಿ.  ಇವೇಲವು  ಅವನ  ಮೇಲೆ ಅವಳಿಗರಿವಿಲ್ಲದೆ  ಬಂದದ್ದು.  ಸಾಮಾನ್ಯವಾಗಿ  ಎಲ್ಲರು  ಅವನನ್ನು  ನೆನೆಯಲು  ಸಮಯ  ನಿಗದಿಪಡಿಸಿಕೊಂಡಿರುತ್ತಾರೆ.  ಆದರೆ  ಅವಳಿಗೆ  ಸಮಯದ  ಅರಿವಿಲ್ಲ.  ಪ್ರತಿ  ಕ್ಷಣ  ಅವನನ್ನು   ನೆನೆಯುವುದೆ  ಅವಳ  ಮುಖ್ಯ  ಕೆಲಸ.  ಅವಳದೆ  ಆದ  ಒಂದು  ಪುಟ್ಟ  ತೊಟವೊಂದಿದೆ.  ಅದರಲ್ಲಿ  ಅರಳಿದ  ಒಂದು  ಹೂವನ್ನು  ಅವಳು  ತನ್ನ  ತಲೆಯಲ್ಲಿರಿಸುವುದಿಲ್ಲ  ಆ  ಹೂ  ಎಂದಿಗೂ  ಅವನಿಗೆ  ಮೀಸಲು.  ಅವಳಲ್ಲಿ  ಅವನ  ಅದೆಷ್ಟು   ವಿಗ್ರಹಗಳಿವೆಯೋ,  ಭಾವಚಿತ್ರಗಳಿವೆಯೋ?  ಅವೆಲ್ಲವೂ  ಅವಳಿಗೆ  ಬಂದ  ಉಡುಗೊರೆಗಳೆ.  ಅವಳು  ಅವನನ್ನು  ಯಾವ  ಪರಿ  ನೆನೆಯುವಳೆಂದರೆ ಒಂದು  ಮುಂಜಾನೆ  ಅವಳಮ್ಮ  ಅವಳಲ್ಲಿ  ಕೆಳಿದರು ರಾತ್ರಿ  ಯಾಕೇ  ಮಾತಾನಾಡುತ್ತಿದ್ದೆ  ಎಂದು.  ಅದಕ್ಕೆ  ಅವಳು  ಕೆಳಿದಳು  ಏನು  ಮಾತಾನಾಡುತ್ತಿದ್ದೆ  ಎಂದು.  ಅವರಮ್ಮನ  ಉತ್ತರದಿಂದ  ಅವಳಿಗೆ  ತುಂಬಾ ಸಂತೋಷವಾಗಿತ್ತು  ಕಾರಣ  ಅವಳು  ಕನವರೆಸಿದ್ದು  ಅವನ  ಹೆಸರು.  ಅವಳು  ಅವನನ್ನು  ತುಂಬಾ  ನಂಬುತ್ತಾಳೆ  ಪ್ರೀತಿಯಿಂದ  ಬೈದದ್ದು  ಉಂಟು.  ಅವಳ  ಹುಟ್ಟುಹಬ್ಬಕ್ಕೆ  ಹೊಸ  ಬಟ್ಟೆ  ಕರಿದಿಸುವಳೊ  ಇಲ್ಲವೋ   ಅವನ  ಹುಟ್ಟುಹಬ್ಬಕ್ಕೆ  ಮರೆಯದೆ  ಕರಿದಿಸಿ  ಸಂಬ್ರಮಿಸುತ್ತಾಳೆ.  ಅವಳನ್ನು  ಅತೀ  ಹೆಚ್ಚು   ಪ್ರೀತಿಸುವುದು  ಅವನೇ  ಎಂದು  ತಿಳಿದಿದ್ದಾಳೆ.  ಅವನ  ಬಗ್ಗೆ  ಅವಳೋಂದಿಗೆ  ತರ್ಕ  ಮಾಡಲು  ಯಾರಿಂದಲು  ಸಾಧ್ಯವಿಲ್ಲ.  ಅವಳು  ಎಂದು  ಕಾಣದ  ಅವನಲ್ಲಿ  ಸದಾ  ಮಾತಾನಾಡುತ್ತಿರುತ್ತಾಳೆ.  ಅವಳಿಗೆ  ಅವನ್ನುತ್ತರದ   ಅವಶ್ಯಕತೆ  ಇಲ್ಲ.  ಯಾಕೆಂದರೆ  ಅವನು  ಸದಾ  ತನೊಂದಿಗಿರುವನೆಂಬ  ಬಲವಾದ  ನಂಬಿಕೆ.  ಇಷ್ಟಕ್ಕು  ಜೀವನವೆಂದರೆ  ನಂಬಿಕೆ  ಅಲ್ಲವೇ.  ಒಮ್ಮೊಮ್ಮೆ ಅವಳು  ಹೀಗೂ  ಯೋಚಿಸುತ್ತಾಳೆ ಸಮಯವಿಲ್ಲದ  ಸಮಯದಲ್ಲಿ  ನೆನೆಯುವುದರಿಂದ  ಅವನಿಗೆನಾದರೂ  ತೊಂದರೆಯುಂಟಾಗುತ್ತದೆಯೋ ಎಂದು.  ಅವಳಿಗೆ  ಇಷ್ಟವಿಲ್ಲದ  ವಿಷಯ  ಒಂದಿದೆ  ಅದೇನೆಂದರೆ  ಅವನನ್ನು  ಇವಳು  ಬಿಟ್ಟು  ಬೆರಾರು  ನೆನೆಯಬಾರದು.  ಆದರೆ  ಯಾರಿಗಾದರೆ  ಅವನಿಷ್ಟವೆಂದು  ಇವಳಿಗೆ  ತಿಳಿದರೆ  ಅವರಮೇಲೆ  ಇವಳಿಗೆ  ಪ್ರೀತಿ  ಹೆಚ್ಚಾಗುತ್ತದೆ.

ಇಷ್ಟು   ಓದಿದ  ನಂತರ  ನಿಮಗೆ  ತಿಳಿದಿರುತ್ತದೆ  ಅ  ಅವನು  ಮನುಷ್ಯನಲ್ಲವೆಂದು. ಅವನು  ಬೆರಾರು  ಅಲ್ಲ  ಶ್ರೀ ಪಾರ್ವತಿಪರಮೇಶ್ವರನ  ಪುತ್ರ  ಶ್ರೀಗಣೇಶ.  ಅದರೆ  ಅವಳಿಗೆ  ಮಾತ್ರ  ಅವನು  ಸಾಮಾನ್ಯ  ಮನುಷ್ಯ  ಹಾಗೂ  ಅವಳ  ಪ್ರಿತಿಯ  ಅಣ್ಣ.  ಅಕ್ಕರೆಯಿಂದ  ನೋಡಿಕೊಳ್ಳುವ  ಪ್ರೀತಿಯಿಂದ  ಮಾತಾನಾಡಿಸುವ ಅವಳೊಂದಿಗೆ  ಸದಾ  ಇರುವ  ಪ್ರೀತಿಯ ಅಣ್ಣ. ಅವಳ  ಪ್ರೀತಿಯ  ಅಣ್ಣ  ಮಾತ್ರ............

7 comments:

 1. purnakka nanu modlu 2 lines odbekadrene nange gottaithu ninu ganappan baggene bardirodu antha hege nanu, ninge ganesha hego nange ninu hage

  ReplyDelete
 2. channagide akka, nam bagge nave baredukolludu sulaba alla, adarallu nimmana neevu haragininda vishleshisikondiddira. heege baritha iri............

  ReplyDelete
 3. ಅಂಜನಾ ಅವರೇ...
  ನಿಮ್ಮ ಭಾವ ಚೆನ್ನಾಗಿದೆ.. ಆದರೆ ಕಾಗುಣಿತ ತಪ್ಪುಗಳು ಬಹಳ ಇವೆ. ನಾವು ಬರೆದಿರುವುದು ಎಲ್ಲಾ ರೀತಿಯಲ್ಲೂ perfect ಆಗಿದ್ರೆ ಮಾತ್ರ ಅದು ಓದುವವರ ಮನ ತಲುಪುತ್ತೆ. ಇಲ್ಲದಿದ್ದರೆ ಬರಹ ಪೂರ್ತಿ ಓದುವುದೂ ಇಲ್ಲ ಯಾರೂ... ಹೀಗಂದೆ ಅಂತ ತಪ್ಪು ತಿಳಿಯಬೇಡಿ.. ಈಗಿನ್ನೂ ಬ್ಲಾಗ್ ಶುರು ಮಾಡಿದ್ದೀರಿ ಅದಿಕ್ಕೇ ಹೇಳಿದೆ. ನಿಮಗೆ ಗೊತ್ತಲ್ಲ ಯಾವುದೇ ಖರ್ಚಿಲ್ಲದೆ ಸಿಗುವ ಒಂದೇ ಒಂದು ವಸ್ತು ಎಂದರೆ ಉಪದೇಶ... ಹ್ಹ ಹ್ಹ.. ಅದನ್ನೇ ನಾನೂ ಮಾಡಿದ್ದು. ಆದರೆ ಅದರ ಹಿಂದಿನ ಉದ್ದೇಶ ಮಾತ್ರ ನಿಮ್ಮ ಬೆಳವಣಿಗೆಯಾಗಲಿ ಎಂಬುದು. ನನ್ನ ತಾಣಕ್ಕೆ ಬಂದು ಪ್ರತಿಕ್ರಿಯೆ ಹಾಕಿದ್ದಿರಿ... ಅದನ್ನು ನೋಡಿ ನಾ ನಿಮ್ಮನ್ನು ಹುಡುಕಿಕೊಂಡು ಬಂದೆ.... ಶುಭ ಹಾರೈಕೆಗಳು....

  ReplyDelete
 4. ಇವಳನ್ನು ಮುಗ್ಧೆ ಎನ್ನಬೇಕು

  ReplyDelete
 5. Thank you very much Naveena, Suri, AntharangadaMaathugalu & balavana for u r comments

  ReplyDelete
 6. correct ಇವಳನ್ನು ಮುಗ್ಧೆ ಎನ್ನಬೇಕು

  ReplyDelete