Monday, November 22, 2010

ನಾ  ಕಂಡಂತೆ  ಧರ್ಮಸ್ಥಳ
 

ಶ್ರೀ  ಕ್ಷೇತ್ರ ಧರ್ಮಸ್ಥಳ

"ಇದು  ನನ್ನ  ಮೊದಲ  ಬರವಣಿಗೆ  ತಪ್ಪಿದ್ದರೆ  ಕ್ಷಮೆ  ಇರಲಿ"

ಸುಂದರ  ಪ್ರಕೃತಿಯ  ಮಡಿಲಲ್ಲಿ  ಶ್ರೀ ಮಂಜುನಾಥನ  ಮಂದಿರ. ಅ  ದಯಾಮಯಿಯನ್ನು  ನೊಡಲು  ಎರಡು  ಕಣ್ಣು  ಸಾಲದು. ಅವನನ್ನು  ನೆನೆದರೆ  ಸಾಕು ಈ  ಜೀವನಕ್ಕೆ  ಇನ್ನೆನ್ನು  ಬೇಕು.  ಅವನ ಧ್ಯಾನದಿಂದ  ಪರಿಪುರ್ಣವಲ್ಲವೆ  ಈ  ಜೀವನ.  ಅ  ಮಂಜುನಾಥನನ್ನೆ  ನೋಡಿಕೊಳ್ಳಲು  ಅವನೇ  ನೇಮಿಸಿಕೊಂಡ  ನಿಸ್ವಾರ್ಥ  ಸೇವಕರು  ಶ್ರೀ ವೀರೆಂದ್ರ  ಹೆಗ್ಡೆಯವರು.  ಆ  ಮಂದಿರದ  ಪ್ರತಿಯೊಂದು  ನಿಯಮವು  ಅವರ  ನಿಸ್ವಾರ್ಥತೆಯನ್ನು  ಸಾರುತ್ತದೆ.  ಎಲ್ಲ  ಭಕ್ತರಿಗು  ಒಂದೆ  ನಿಯಮ  ಅವನು  ಧನಿಕನಾಗಲಿ ಅಥವಾ  ಬಡವ?  ಎಲ್ಲರು  ಸಾಲಿನಲ್ಲಿ  ಬಂದೆ  ಆ  ಕರುಣಾಮಯಿ  ಶ್ರೀ  ಮಂಜುನಾಥನ  ದರ್ಶನ  ಮಾಡಬೇಕು.  ಅಲ್ಲಿ  ಉಳಿದುಕೊಳ್ಳುವ  ಕೊಠಡಿಯ ಬಾಡಿಗೆ  ಮೊತ್ತ  ರೂ.೧೦  ನಾವು  ಖಾಲಿಮಾಡುವಾಗ  ಅದೆ  ಮೊತ್ತದ  ಉಪಯುಕ್ತ  ಪುಸ್ತಕ  ನಮಗೆ  ಉಚಿತವಾಗಿ  ದೊರೆಯುತ್ತದೆ. ಖಾಲಿ  ಇಲ್ಲದಿರುವಾಗ ಅದಕ್ಕೆಂದು  ಬೆರೆಯೆ  ವ್ಯವಸ್ತೆಯಿದೆ  ಅದೆನೆಂದರೆ  ಮಲಗಲು  ಉಚಿತ  ಸ್ಥಳ  ಜೊತೆಗೆ  ಒಂದು ಚಾಪೆ.  ಉಚಿತ  ಪಾಯಿಕಾನೆಗಳು(Toilet) ಹಾಗೂ  ಸ್ನಾನದ ಮನೆ ಅದು  ಶುಚಿತ್ವವಾಗಿ  ಇಲ್ಲದಿದ್ದರೆ  ಅದಕ್ಕೆ  ಕಾರಣ  ಸಾರ್ವಜನಿಕರೆ (ಈ  ಸಾರ್ವಜನಿಕರಿಗೆ  ಶುಚಿತ್ವವಾಗಿ  ಇಟ್ಟುಕೊಳ್ಳಲು  ಬರುವುದಿಲ್ಲವಲ್ಲ). (ಈ  ಲೇಖನ  ಓದುವ  ಎಲ್ಲಾ  ಭಕ್ತರಲ್ಲಿ  ನನ್ನದೊಂದು  ಮನವಿ  ಯಾರೇ  ಯಾವುದೇ  ಪುಣ್ಯ  ಕ್ಷೇತ್ರಕ್ಕೆ  ಹೋದರು ನಿಮ್ಮ  ಮನೆಯೆಂದು  ತಿಳಿದು  ಅಲ್ಲಿನ  ಶುಚಿತ್ವವನ್ನು  ಕಾಪಾಡಿ).  ಯಾವುದಕ್ಕು  ಹಣದ  ಅಪೇಕ್ಷೆ  ಇಲ್ಲ.  ಅಲ್ಲಿ  ಕೆಲಸ  ನಿರ್ವಹಿಸುವ  ಪ್ರತಿಯೊಬ್ಬರು  ಸೌಮ್ಯವಾಗಿ  ವರ್ತಿಸುತ್ತಾರೆ  ಇದೆಲ್ಲ ಧರ್ಮಾಧೀಕಾರಿ ಹೆಗ್ಡೆಯವರ ಮಾರ್ಗದರ್ಶನದಿಂದ.  ಉಚಿತ  ಭೋಜನ ಸಾಲಿನಲ್ಲಿ  ನಿಲ್ಲುವ  ಅವಶ್ಯಕತೆಯಿಲ್ಲ  ಕಾರಣ  ತುಂಬಾ  ದೊಡ್ಡದಾದ  ಭೋಜನಶಾಲೆ.  ಉಚಿತ  ಮದುವೆ.  ಇಂತಹ   ಪುಣ್ಯದ  ಕಾರ್ಯವನ್ನು   ಶ್ರೀ  ಮಂಜುನಾಥನ  ದಯೆಯಿಂದ ಧರ್ಮಾಧೀಕಾರಿ  ಶ್ರೀ  ಹೆಗ್ಡೆಯಂತವರಿಂದ  ಮಾತ್ರ  ಸಾಧ್ಯ. ಅಲ್ಲಿನ ಒಂದು ಪ್ರತೀತಿ (ಮನೆಯ  ಹಿರಿಯರ  ಮಾತು) ಅದೆನೆಂದರೆ  ಆ  ದಯಮಯಿ  ಶ್ರೀ  ಮಂಜುನಾಥನನ್ನು  ದರ್ಶನಮಾಡುವ  ಮೊದಲು  ನೇತ್ರಾವತಿಯಲ್ಲಿ  ಸ್ನಾನಮಾಡಬೇಕೆಂಬುದು   ಅದರೆ  ಅಲ್ಲಿ  ಸ್ನಾನಮಾಡಲು  ಮನಸೇ  ಆಗುವುದಿಲ್ಲ  ಕಾರಣ  ಅದು  ಶುಚಿಯಾಗಿಲ್ಲದಿರುವುದು (ಅದಕ್ಕೂ  ಸಾರ್ವಜನಿಕರೆ  ಕಾರಣ).  ಒಂದು  ಹೇಳಲೆಬೇಕಾದ ವಿಷಯ  ಇಲ್ಲಿ    ವಿಧ್ಯಾಭ್ಯಾಸದ  ವ್ಯವಸ್ಥೆ  ಕೂಡ  ಇದೆ.  ಧರ್ಮಾಧೀಕಾರಿಗಳು  ಪ್ರತಿ  ವರ್ಷವು  ಬೇರೆ  ಬೇರೆ  ಊರಿನಲ್ಲಿ ರೈತರಿಗಾಗಿ  ಒಂದು  ಮೇಳವನ್ನು  ಏರ್ಪಡಿಸುತ್ತಾರೆ  (ರೈತಮೇಳ - ಜಾತ್ರೆ).   ಅದರಲ್ಲಿ  ಲಕ್ಷಂತರ  ರೈತರು  ಪಾಲ್ಗೊಳ್ಳುತ್ತಾರೆ.  ಸ್ಪರ್ಧೆಗಳನ್ನು   ಏರ್ಪಡಿಸಿರುತ್ತಾರೆ.  ಗೆದ್ದವರಿಗೆ  ಬಹುಮಾನಗಳನ್ನು  ವಿತರಿಸುತ್ತಾರೆ.

4 comments:

  1. channagi bardidya akka, keep it up, devarinda shuru madidiya, idaralli aadyathmika vishaya, samajika kalakali, parisarada prajne jothe vasthava vicharagala prasthapa chennagide.

    ReplyDelete
  2. yen purnakka ist sakath agi bardidiya nijvaglu nanu yochne madtidde adre istella yochne bandirlilla sakath chennagi bardidiya nijvaglu idan odudoru suchithva kapadoke mans madtare ansatte idanne continue madu adre hegde avrge prathi spardi agbeda aytha olle samjika kalji ide

    ReplyDelete
  3. super agi bardiddiya. nanaganisiddu sentence long agi irbeku.

    ReplyDelete
  4. ಬರಹ ತುಂಬಾ ಚನ್ನಾಗಿದೆ .ಬರಯಿರಿ .ಒಳ್ಳೆಯದಾಗಲಿ

    ReplyDelete